Pages

Sunday, December 19, 2010

ಮೇಘ ಸಂದೇಶ

Madamಗೊಂದು ಮೇಘ ಸಂದೇಶ
ಕಳುಹಿಸೆನು ಸ್ವರ್ಗದಿಂದ ಇಂದ್ರ
ಹೀಗಂತ.. ನಿನ್ನ ಚೆಂದ ಅಪ್ಸರೆಗಿಂತ ಅಂದ
ಈದ ಕೇಳಿ ನಾಚಿ ನೀರಾದನು ಚಂದ್ರ
ಬರುತಿಹೆನು ಇಂದು ನೋದಲು ನಿನ್ನ!!
ಅವಿತುಕೊಂಡು ಸತಾಯಿಸಬೇಡ ಅವನನ್ನ!!!

exhibition

ಪ್ರೀಯಕರ: ಪ್ರೀಯೇ ಈ ಸುಂದರ ಸಂಜೆಯಲ್ಲಿ ಸಪ್ಪೆ ಮೋರೆ........ ಛೀ ........ ಛೀ
ಪ್ರೀಯತಮೆ: ಮಾತ್ ಮಾತಿಗೂ... ಪ್ರೀಯೇ ನಿಂಗೆ ತಾಜ್ ಮಹಲ್ ಕಿತ್ತು ತರಲೇ... ಕಿತ್ತು ತರಲೇ.....
ಅನ್ತಿದ್ದೆ... ನಿಮ್ಮಜ್ಜಿ... exhibition ( Mysore)ನಲ್ಲಿ ತಾಜ್ ಮಹಲ್ ಸೆಟ್ ಇದೆ... at least ಅಲ್ಲಿಗಾದ್ರು ಕರಕೊಂಡ್ ಹೋಗು!
ಸೋಮರಿ ಸುಕುಮಾರ !!!

Thursday, December 16, 2010

ಪ್ರೀತಿಯ ಪಯಣದ ದಾರಿ!!

ನನ್ನ ಸ್ನೇಹಿತೆಯೊಬ್ಬಳು ಕಳುಹಿಸಿದ್ದ ಸಂದೇಶ ಹೀಗಿತ್ತು
" ಎಲ್ಲರೂ ಹೇಳ್ತಾರೆ... ಪ್ರೀತಿ ಪ್ರೇಮದ ದಾರಿಯುದ್ದಕ್ಕೂ ನೋವು
ಬರೀ... ನೋವು...!
ಅದಕ್ಕೇ ಆ ಹಾದಿಯ್ಲೋಂದು ತೆಗುದು ಬಿಡಿ ಔಷಧಿ ಅಂಗಡಿ
ಒಳ್ಳೆ ವ್ಯಾಪಾರ!!!!

ಆದರೇ... ಇಂದಿಗೂ ಅರ್ಥವಾಗದ ಸಂಗತಿಯೆಂದರೆ....
" ಲೋಕವೇ ಹೇಳಿದ್ರು ಪ್ರೀತಿ ಮುಳ್ಳಿನ ಹಾದಿಯೆಂದು..
ಮತ್ಯಾಕೆ ಮನುಜೀವಿಗಳು ಪರಿತಪಿಸುವುದು
ಮತ್ತೆ ಮತ್ತೆ ... ಆ ಪ್ರೀತಿಗೇ!!!!

ಇದರ ಸತ್ಯಾಸತ್ಯಗಳ ಶೋಧಿಸ ಹೋರಟಾಗ ತಿಳಿತು,
ಲೋಕ( ಪ್ರೀತಿಯ ಕಹಿಯುಂಡವರು) ಮಾತ್ರ ದೂಷಿಸುವರು ಪ್ರೀತಿಯ...!
ಪ್ರೀತಿಯ ಕಹಿ ನೆತ್ತಿಗೇರಲು ಕಾರಣ??? ಪ್ರೀತಿಯಿಂದ ಅಪರಿಮಿತ ಪ್ರೀತಿಯನ್ನು ಬಯಸುವುದು...!!
ಇಲ್ಲ ..ಅರ್ಥ ಮಾಡಿಕೊಳ್ಳದ ಮುಡತನ!!

ಮನದ ಮಾದುರ್ಯ ಮೌನವಾಗಿ ಕಲೆತು ಗುಪ್ಪೆಯಾಗಿ ಪ್ರೀತಿಯ ಕಹಿ ನೆತ್ತಿಗೆರಿದರೇ.... ಕಣ್ಣೆದುರು ಸುಂದರ ಮಯೂರ ನರ್ತಿಸಿದರು ಸವಿಯಾಲಗದ ಸಂಕಟ ಮನಕೆ!!

ಹಾಗೆ ಸವಿಯಲ್ಲದ.., ಮನಕೆ ಹಿತವಲ್ಲದ ದಾರಿ....
ಪ್ರೀತಿಯ ಮಹಲಿನ ದಾರಿಯೇ ಅಲ್ಲ!!
ಅದು ಪ್ರೀತಿಯ ದಾರಿಯೆಂಬ ಭ್ರಮೆಯ ಕಾವಲು ದಾರಿ!!

ಪ್ರೀತಿ ಬಾಸ್ಕರನ ಬೆಳಕಿದ್ದ ಹಾಗೆ.... ಹಿಡಿಯಲಾಗದು .. ಮುಚ್ಚಿದಲಾಗದು... ಮುಗಿಯದು
ಎಂದೆಂದಿಗೂ ಅನಂತ... ಆನಂದ!!!