Pages

Friday, October 29, 2010

ಮುಸ್ಸಂಜೆಯ ಹುಸಿ ಮುನಿಸಿನ ಚಿತ್ರಣ


ಮನಸ್ಸು ಸ್ವಚಂದವಾಗಿ ಹಾರಡುತ್ತಾ ಸಾಗಿರುವಾಗ

ಬೂದು ಬಣ್ಣದ ಬಾನಿನ ಸೌಂದರ್ಯ.....
ಬಾಸ್ಕರನು ಮನೆಯತ್ತ ಮುಖಮಾಡಿ ನಡೆಯುತ್ತಿರ ನಯನಮನೋಹರ ದ್ರುಷ್ಯ!!
ಹಕ್ಕಿಗಳು ಚಿಲಿಪಿಲಿಗುಡುತ್ತಾ ಗುಡಿನೆಡೆಗೆ ಹಾರುತ್ತಿರುವ ಗಾನ
ಈ ಎಲ್ಲ ವಿಸ್ಮಯ ವಾತಾವರಣದ
ಸವಿಯ ಸವಿಯುತ್ತ ಸಾಗಿರುವಾಗ.....

ಸರಕ್ಕನೇ ಕಂಡ .... ಇನ್ನೊಂದು ಲೋಕ..!!

25ರ ಅಸುಪಾಸಿನ ಜೋಡಿ.....
ಕುಳಿತಿರಲು ಹುಲ್ಲುಹಾಸಿನ ಮೇಲೆ... ಸರ್..!!! ಸರ್..!! ಎಂದು ಹತ್ತಿರ ಬರುವ ಹುಡುಗಿ.....ಗುರ್ರ್ ನೆ... ಸರಿಯುವ ಹುಡುಗ
ಹುಡುಗಿ ( ಅಲ್ಲ ಕಥಾ ನಾಯಕಿ )... ಪಡುತ್ತಿರುವ ಕಷ್ಟದ ಪರಿಯ ಕಂಡು, ಕ್ಷಣಕ್ಕೇ ನನ್ನ ಮನವು ಚುರ್ ಎಂತು {ಎಷ್ಟೆಯಾದ್ರು ಬಾಲೆಯಯಲ್ಲವೇ ;) }
ಆಕೆ ತನ್ನ ನೀಳ ಕೇಶವ ಕುಂಚದಂತೆ ಮಾಡಿ.... ಹಣೆಯಿಂದ ಮೂಗಿನವರೆಗೂ ಮುದ್ದಿಸುತ್ತಿದ್ದರೂ...... ಕರಗಲಿಲ್ಲ ಮೂಗಿನ ತುದಿಯ ಕೋಪ!!

ಪಾಪ ಬೆಪ್ಪು ಸುಂದರಿಯ ಪ್ರಯತ್ನವೆಲ್ಲ ವ್ಯರ್ಥವಾಗುತ್ತಿತ್ತು :( :(
ಅಷ್ಟಕ್ಕೂ ಕೋಪದ ಕಾರಣ ತಿಳಿಯೋಣವೆಂದರೆ.....
ಬಾಯಿ ಬಿಡದ ಮೂಕ ಸುಂದರ.....>>>>>>

ಇಷ್ಟಾಗುದೊರಳಗೆ ಕತ್ತಲು ಇಣುಕಿತ್ತು... ಸುತ್ತಾಡಿದ್ದು ಸಾಕೆಂದು ನನ್ನ ಮನವು ವಾಪಸ್ಸು ಬಂದು ಕುಳಿತ್ತಿತ್ತು...!!!
ಅದರೊ ಕೇಳದ ಚಂಚಲ ಚಿತ್ತವು ತಿರುಗಿ ನೋಡಿದರೆ..????????

ಇನ್ನೊಂದು ಜೋಡಿ...
ಸರ್..!!! ಸರ್..!! ಎಂದು ಹತ್ತಿರ ಬರುವ ಹುಡುಗ.....ಗುರ್ರ್ ನೆ... ದೂರ ಸರಿಯುವ ಹುಡುಗಿ!!

ಆಗ ತಿಳಿಯಿತು ... ಗುರ್ರ್ .. ಚುರ್ರ್.... ಅನ್ನದೆ ಇರುವ ಪ್ರೀತಿಯೇ ಇಲ್ಲವೆಂದು :)

ಸುಪ್ತ ಮನಸ್ಸಿನ...ಎರಡು ಮಾತು: ಜೀವನದ ದುಗುಡ ದುಮ್ಮನಗಳು .... ಮನಸ್ಸಿನ ಆಗೋಚರ ಆಲೋಚನೇಗಳು...

ಸುಪ್ತ ಮನಸ್ಸಿನ...ಎರಡು ಮಾತು: ಜೀವನದ ದುಗುಡ ದುಮ್ಮನಗಳು .... ಮನಸ್ಸಿನ ಆಗೋಚರ ಆಲೋಚನೇಗಳು...: "ಜೀವನದ ದುಗುಡ ದುಮ್ಮನಗಳು .... ಮನಸ್ಸಿನ ಆಗೋಚರ ಆಲೋಚನೇಗಳು.. ವಯಸ್ಸಿನ ಆಸೆ ಆಕಾಂಕ್ಷೇಗಳು...ಪರಿಸ್ಥಿತಿಯ ಒತ್ತಡಗಳು... ಆಳತೆಗೆ ಮೀರಿದ ನಾನಾ ಬಯಕೆಗಳು.. ಎಲ್ಲವನ್ನು ..."

ಜೀವನದ ದುಗುಡ ದುಮ್ಮನಗಳು ....

ಮನಸ್ಸಿನ ಆಗೋಚರ ಆಲೋಚನೇಗಳು..
ವಯಸ್ಸಿನ ಆಸೆ ಆಕಾಂಕ್ಷೇಗಳು...ಪರಿಸ್ಥಿತಿಯ ಒತ್ತಡಗಳು...


ಆಳತೆಗೆ ಮೀರಿದ ನಾನಾ ಬಯಕೆಗಳು..
ಎಲ್ಲವನ್ನು ಮೂಟೆಕಟ್ಟಿದ ನಂತರವೇ ....
ಹುಡುಕ ಹೋರಡಿ ....


ಸಂತೋಷವೆಂಬ ಐಶ್ವರ್ಯವನ್ನು..!

ಪ್ರೀತಿ ಪರಿಪಾಟದ ಪರದಾಟ!!!!...

ಭಗವಂತನೇ ಬಂದು ಹೇಳಿದ್ರು ಸರಿ

..ಪ್ರೀತಿ .. ಹಗಲು ಕಂಡ ಬಾವಿ...ಖೆಡ್ಡ...ಕಣಿವೆ...

ಅದರ ಆಳ ನೋಡದೇ ಬಿಡುವುದಿಲ್ಲ..

ಅದೆ ಹದಿ ಹರೆಯ ವಯಸ್ಸು!!!