Pages

Friday, October 21, 2011

ನಾ ಕರಗಿ ಹೋಗುತ್ತಿದೆ...ಅಣು ಅಣುವಾಗಿ


ವಿರಹ ವಿಶ್ಲೆಷಣೆ ಮಾಡೋ ಪ್ರೆಮೇಯ ಬರಲಿಲ್ಲ ನನಗೆ....,
ನೀನಿರುವಾಗಾ ಪ್ರೀತಿಯ ಸೂರ್ತಿ ಸೆಲೆಯಾಗಿ....
ನನ್ನ ಹ್ರುದಯದ ಪರಪಂಚದ ಪ್ರೀತಿಯ ವಿಶ್ಲೇಷೆಕಿಯಾಗಿ ಮಾಡುತ್ತಿದ್ದೆ,
ಪ್ರತಿ ಬಾವನೆಯನ್ನು... ಕನಸು ತುಂಬಿದ ಬಣ್ಣಬಣ್ಣ ಒಕುಳಿಯಾಗಿ...!


ಸದಾ ಎದೆಯೊರಗಿ ನೀ... ಮುದ್ದಿನಿಂದ ಗುದ್ದುತ್ತಿರಲು ..
ನಾ ಕರಗಿ ಹೋಗುತ್ತಿದೆ...ಅಣು ಅಣುವಾಗಿ !!!

ಹೀಗಿರುವಾಗ ವಿರಸ ಸುಳಿಯದ ವಿನೋದಮಯ ಪಯಣದಲ್ಲಿ..
ವಿರಹದ ಸುರುಳಿ ಸುಳಿಯಲು ಸಾಧ್ಯವೇ????

Sunday, October 9, 2011

Scene 1... BAR table #3

(ಟೈಟ್ ಸೀನ):.... ಎನೋ ಮಚ್ಚ ಆಕಾಶ ತಲೆ ಹೋತ್ತಕೋಂಡಿರೋಹಾಗ್ ಕೂತ್ತಿದ್ದಿಯಲ್ಲೊ!!! ತಗೋಳೊ...30!!
 (ಬೋರ.. ): Boss ಬೈದ್ರ??? tensionಅಅಅ??? ಯಕೋ???

 (ಟೈಟ್ ಸೀನ):ಇಲ್ಲಾಪ್ಪ...ಒಂದ್ ಡೌಟು??
 ಹುಡ್ಗಿರೇ ಕಮ್ಮಿ...
 ಇರೋ ಹುಡ್ಗಿರಲ್ಲಿ... ನಡು ನೋಟ ಇರೋವ್ರೆ ಕಮ್ಮಿ!!!
ನಡು ನೋಟ ಇರೋ ಹುಡ್ಗಿರಲ್ಲಿ.... ನಡೆ ನುಡಿ ಇರೋವ್ರೆ ಕಮ್ಮಿ!!!
 ನಡೆ ನುಡಿ ಇರೋ ಹುಡ್ಗಿರ್ ಕಡೆ ನೋಡೋಕೆ...
ಅವ್ರುಗಳಿಗೆ ಬೇರೆ ಕಡೆ ಒಡನಾಟ!!
ಎನೇ permutation combination ಮಾಡಿ ನೋಡಿದ್ರು... satisfaction ಅಗೋ figureಸಿಗಲ್ಲಪ್ಪ!!

 (ಬೋರ.. ):ಸರಿ ಇವಗ್ ಯಾಕೇ ಈ ಡೌಟು... ???
(ಟೈಟ್ ಸೀನ): ಹತ್ತ್ ವರ್ಷದಿಂದ ನೋಡ್ತಾ ಇದ್ದ...
"ಹಂಸ" ಗೇ... 8 ಜನ ಇದ್ದಿದ್ದೆ ಗೊತ್ತಿಲ್ಲ ಅದಿಕ್ಕೆ!!

 (ಬೋರ.. ): ಇವಾಗ.. ನಿಂಗೆ... 6 dove ಇರೋದೋ ನಮ್ಗೆ ಗೊತ್ತಾ...
 (ಟೈಟ್ ಸೀನ): ಗೋತ್ತಿಲ್ಲ್ದೆ... 6 ಜನ ಅಂತ ಹೆಂಗೇ. ಹೇಳಿದ್ರಿ...its 7 ದಡ್ರಾ..!! ಇನ್ನು 30 ಕಣಾಪ್ಪ!!

Just Thought !!

ಎದೆಯಲ್ಲಿ ಎರುತಿದೆ ಬಿರುಗಾಳಿ ನಿನಾಗಗಿ!!.., ನಿನ್ನನ್ನು ನೋಡಲು ಕುತೂಹಲದಿಂದ ಕೆಕ್ಕರಿಸಿ ಕುಳಿತಿದೆ ಮನಸ್ಸು ;) ಆದ್ರೂ... ಬುದ್ದಿಯೆಂಬ ಬುರುಡೆ ಉರುಳಿ ಉರುಳಿ ಒಡ್ತಿದೆ, ದೂರ ಹೆದರಿ ಹೆದರಿ!! ಇಡೀ ಕತೆ ಮೂರೆ ಸಾಲಲ್ಲೆ!! ಮೂಗಿಸೋಕೆ ಮನಸಿಲ್ಲ!! ಇನ್ನ ಹೇಳೊಕೆ ಎನೂ ಉಳಿದಿಲ್ಲ.... ಯಾಕೆದ್ರೆ.. ????? ಎನಾದ್ರು ಆಗಿದ್ರೆ ತಾನೆ ಹೇಳೊದು :( :(

Sunday, July 3, 2011

ಕಣ್ ನೋಟ ;)


ನೀನಗೆಂದೆ ಈ ಎಲ್ಲ ಮನದ ಮಾತು...
ಹೇಳುವ ಅತುರ ನನಗೇ :(.... ಕೇಳುವ ಕಾತರ ನೀನಗಿಲ್ಲ.
ಬಿಚ್ಚದೆ.., ಎದೆಗೂಡಲ್ಲೆ ಬಚ್ಚಿಡ ಬಯಸಿದ್ರು...
ಬಗ್ಗಿ ಬಗ್ಗಿ ನೋಡುವ ಬಯಕೆ ಕಂಗಳ ಮುತ್ತಿನ ಹನಿಗೆ .. ಭುವಿಯನ್ನ!

ಸಹಿಸಲಾಗದು ಸಂಕಟ...
ಭಾವನೆ ಬವಣೆ..ಭಾಂದವ್ಯ., ಬರಿಯ ... ನೀರ ಹನಿಯಾಗಿ ಬರಿದಾಗುವಾಗ.
ಅದಕ್ಕೆ ನಾ ಹೇಳಿದೆ ನಿನಗೆ ಕಿರುಚಿ... ಕಿರುಚಿ....
ಆದರೆ ತಿರುಚಿ ತಿರುಚಿ.... ಕೇಳುತ್ತಿದ್ದೆ ನೀನು, ಎನು ತಿಳಿತಿಲ್ಲವೆಂದು..!

ಕಣ್ ನೋಟದಲ್ಲೆ.. ಸಾವಿರಾರು ಪುಟಗಳಷ್ಟು ವಿಷಯವಿದ್ರು....
ಅರ್ಥೈಯಿಸದ.. ಒಲ್ಲದ ಮನಸ್ಸಿನ ವಿಷಾದ ಯಾರಿಗೆ ಬೇಕು.
ಆದ್ರು.. ಆ ಕ್ಷಣ... ರೋಮಂಚನ ಇಂದಿಗೂ... ಎಂದಿಗು ಎಂದೆಂದಿಗೂ :)
ಕೊನೆಗು ರೋಮಂಚನದ ತರಂಗ... ಪತಂಗದಂತೆ ಹಾರಿ ಕೂರಲಿಲ್ಲ ನಿನ್ನ ಎದೆಗೂಡಲ್ಲಿ
ಆ ಕ್ಷಣ ಪರಿಕಲ್ಪನೆಗೂ ಸಿಗದಷ್ಟು ಮಿಗಿಲು!..

Saturday, May 28, 2011

ಹಂಗೆ ಸುಮ್ನೆ!

ಚೆಂದದ ಮನಸ್ಸಿನಿಂದ ನೋಡಿದ್ರೆ ....
ನೋಡೊ ಪ್ರತಿಯೊಂದು..
ಸಂಬಂಧ..
ಸಮಯ..
ಸಂದರ್ಭ..
ಎಲ್ಲವು ಚಂದನದ ಪರಿಮಳದಂತೆ ಅಹ್ಲಾದಕರ..!!
ಆದರೆ... ಪ್ರತಿ ಕ್ಷಣವು ಅದರದೇ ವಿಶಿಷ್ಟ ಪಡೆದಿರುತ್ವೆ...
ಯಾಕೇಂದ್ರೆ ನೋಡೊ ಮನ ಚೆಂದವಿದ್ರು...
ಕಣ್ಣಿರು ಹಂಬಲಿಸಿ... ಹಂಬಲಿಸಿ... ಕೆನ್ನೆಗೆ ಮುತ್ತಿಕ್ಕ ಬಯಸುತ್ತದೆ.