Pages

Sunday, April 20, 2014

ಸದ್ದು!!

ಪದೇ ಪದೇ ಅದೆ ಸದ್ದು!!
ಹ್ರುದಯ ಮಾಡುತಿತ್ತು ... ಖಾಲಿ ಡಬ್ಬದ ಹಾಗೆ!!

ಕೆನ್ನೆ

ಕಾದು ಕಾದು ಕೆಂಪಾಗಗುವುದು ಕಬ್ಬಿಣ ಮಾತ್ರ!... ಕೆನ್ನೆಯಲ್ಲ !!

ರೋಮಾಂಚನ

ಅಕ್ಷಿಯ ಅಂಗಳದ ಆಳಕ್ಕಿಳುದು ಅನುಭವಿಸಿದ ಸವಿಯ ಸಿಂಚನವೇ ರೋಮಾಂಚನ!!!

Sunday, December 29, 2013

ಅವರಿವರು ಅವರಾಗಬಾರದೇ!!!

ಅವರಿವರ ನೋಡಿ ಅರಿವಾಗದೇ.
ಅರಿವಾದರೂ ಅರ್ಥೈಯಿಸದೇ ಹೋಯಿತೇ.....
ನೋಡಿದರೂ ನೋವು ತಿಳಿಯದೇ!
ತಿಳಿಯದೇ ...... ತಿಳಿಯಾಯಿತೇ....
ನರ ನಾಡಿಗಳು ನರಳಿವೇ..
ಅದು ಚಳಿಗಾಗೀಯೋ... 
ಚಡಪಡಿಕೆಗಾಗೀಯೋ..... ತಿಳಿಯಾದಗಿದೆ!!

Friday, March 8, 2013

women's ಡೇ ಸ್ಪೇಷಲ್


women's ಡೇ ಸ್ಪೇಷಲ್ ಅಂತ ಮಹಿಳಾಮಣಿಗಳಿಗೇಲ್ಲಾ ಶುಭಾಶಯಗಳನ್ನ ಹೇಳೋಕೆ ಸಂದೇಶ ಮಾಡಿದ್ರೆ.. ವಾಪಸ್ ರಿಪ್ಲೆ ಬ್ಂದಿದ್ದು ಬೆರಳೆಣಿಕೆಯಷ್ಟು.. ಹೋಗ್ಲಿ ಬಿಡಿ, ಎಲ್ಲ ಅವ್ರ್ ಜೀವನದಲ್ಲಿ ಫ಼ುಲ್ ಬುಸ್ಯಿ  ಅನ್ಕ್ಕೊಂಡ್ ಸುಮ್ಮನಾದೆ. ಅದು ಸರಿನೇ.. ಜಮಾನಕ್ಕೊಂದು ಮಸ್ಸೆಜ್ ಮಾಡಿದ್ರೆ ಯಾರ್ ನೆನಪಲ್ಲಿ ಇರ್ರಾತ್ತೆ ಹೇಳಿ.

ಅಪರೂಪಕ್ಕೆ ಸ್ನೇಹಿತ ಸಿನಿಮಾಗೆ ಕರೆದ ಅಂತ ಹೋದೆ.. ಸಿನಿಮಾ simple Agond love story! ನಾವು ಸಿಂಪಲ್ ಆಗೇ ಸಿನಿಮಾ ನೋಡ್ತಿದ್ದೆ.. ಡೈಲಾಗ್ ಗಳು ಗೋತ್ತೆ ಇವೆ ಒಂದರಲ್ಲಿ ಮೂರರ್ಥ ;) ಅರ್ಥ ಅಗ್ಲಿಲ್ಲ ಅಂದ್ರೆ ಮೂರ್ಖರ್ಥ !!
ಇವಾಗ ಶುರು ಅಯ್ತು ನೋಡಿ ನಾನ್ ಹೇಳ್ ಬೇಕಾಗಿಗೋರೊ ಕಥೆ.. ಯಾವಗ್ಲು ಕುಂಭಕರ್ಣ ತರ ಮಲಗಿರೋ ನನ್ ಮೊಬಲ್ ಕಿರ ಕಿರ ಅನ್ನೋಕೆ ಶುರು ಹಚ್ಚ್ತು... ನಿಲ್ಲಿಸ್ಲೆ ಇಲ್ಲ !!

ಎಲ್ಲ...  who s dis, may i know u, who r u ??? ಅದು ಗೊತ್ತಿರೋರೆ  ಇದೆನಾಪ್ಪ ಇವ್ರು ಮರೆತಿರ್ ಬೇಕು ಅಂತ.. ರಿಪ್ಲೆ ಮಾಡಿದ್ರೆ!
ವಿಚಿತ್ರ ಅವ್ರು ಯಾರ್ ನಾನ್ ಅನ್ಕ್ಕೊಂಡಿರೊರಲ್ಲ... ಅವಾಗ್ ಸಿನಿಮಾ ನೋಡ್ತ ಗೊತ್ತಾಯ್ತು ಸುಮ್ಮ್ನಿರದೆ ಇದ್ದವ್ರು ಇರುವೆ ಬಿಟ್ಟ್ಕೊಂದ್ರೆ ಹೇಗಿರುತ್ತೆ ಅಂತ!!

ಸಂದೇಶ: ವರ್ಷಗಟ್ಟಲೇ ಸಂಪರ್ಕಿಸದಿದ್ದರೆ... ತಿಳಿದುಕೊಳ್ಳಿ ಸಂಪರ್ಕಿಸುವ ಮುನ್ನ, ಅದು ಅವರೇನಾ???

Wednesday, December 12, 2012

ಹಂಬಲ


ಮನಸ್ಸಿನ ಹಂಬಲದ ಕನಸು
ಮಂಜಿನಂತೆ ಕರಗಿ...
ಮರೆಯಾಯಿತು!!
ಈ ಮನಸ್ಸಿಗಿಲ್ಲವಾ ಮರುವಸಂತ!

Tuesday, December 4, 2012

ಮೌನ

ಮೌನವೆಂಬ ಆಯುಧ ಇಷ್ಟು ತೀಕ್ಷ್ಣ ಎಂದು ತಿಳಿದದ್ದೆ ಆಕೆ ಮೌನವಾದಗ!ಮೌನದಲ್ಲೂ ಮಂದಹಾಸ ಬೀರುವ ಕಣ್ ರೇಖೆಗಳು :( ಆದರೆ ಚಾಟಿ ಏಟಿನ ಬಿರುಸು ಸೂಸುವ ನೋಟ!ಆ ನೋಟ ಎದುರಿಸಲಾಗದೆ... ಮೇಲೆ ನೋಡಿದರೆ ಉರಿ ಬಿಸಿಲು!!