Pages

Wednesday, November 23, 2011

ಬಾಯಿ ಬೊಂಬಾಯಿ..

ಹೆಂಡತಿಯರ ಬಾಯಿ ಬೊಂಬಾಯಿ...
ತಡ್ಕೊಳ್ಕಗಲ್ಲ ಕುಡುದ್ರು ಸಾರಾಯಿ!
ಕುಡುದ್ ನಾವ್ ಅಗ್ಬೆಕಷ್ಟೇ ಪೀಪಾಯಿ!!
ಇದು ಕುಡುಕ ಗಂಡಂದಿರ ಅಳಲು :P

Monday, November 21, 2011

ಎರಡು ದಿನ... ಮತ್ತೆ ಬಾಲಕನಾಗಿ ನನ್ನ ಶಾಲೆಯಲ್ಲಿ !


ಮಾನವಿ"ಯತೆಯ ರಜತ ಮಹೋತ್ಸವದ ಮುನ್ನುಡಿ.

ತಲೆ ಬರಹದಷ್ಟೇ ಅರ್ಥಪೂರ್ಣ ಅಲ್ಲಿ ನಡೆದ ಸಮಾರಂಭ.(ನಡೆದ  ಅನ್ನುವುದಕ್ಕಿಂತ .. ವಿಜ್ರಂಭಿಸಿದ ಅನ್ನುವುದೆ ಹೆಚ್ಚು ಸೂಕ್ತ).
ಮಾನವಿ (ಮಾವಿನಕೆರೆ ನವೋದಯ ವಿದ್ಯಾಲಯ)ದ ಪೂರ್ವ ವಿದ್ಯಾರ್ಥಿಗಳ ಕಾರ್ಯಕ್ರಮ.. ಪೂರ್ವಿ ಹೊಂಬಾಳೆ ೨೦೧೧.
ಬಹಳ ದಿನಗಳಿಂದ ನೀರಿಕ್ಷಿಸುತಿದ್ದ ದಿನ ಒಂದೇ ಹೋಯಿತು ಎಂದು ತುರಾತುರಿಯಲ್ಲಿ  ಹಿರಿಯ ವಿದ್ಯಾರ್ಥಿಗಳು (ಪ್ರತ್ಯೇಕವಾಗಿ ಸ್ವಂಸೇವಕರು) ಲಗು ಬಗೆಯಿಂದ ಕಾರ್ಯಮಗ್ನರಾಗಿದ್ದರು. " ಎಂದೂ ರಾಜೋತ್ಸವದ ಮಾಸದಲ್ಲಿ ಮಾಸದ ಪೂರ್ವ ವಿದ್ಯಾರ್ಥಿಗಳ ಸಮಾವೇಶ ಪ್ರಪ್ರಥಮವಾಗಿ ನಡೆದಿದ್ದು ಇದೇ ನವೆಂಬರ್ ೧೨, ೧೩ರಂದು, ಕಾರಣ ಇತ್ತಿಚೀಗೆ ಹೊರಹೊಮ್ಮಿದ ವಿದ್ಯಾರ್ಥಿಗಳ ಪರೀಕ್ಷೇಗಳಿಗೆ ತೊಂದರೆಯಾಗಬಾರದೆಂಬ ಸಮಯೋಚಿತ ಒಕ್ಕೊರಲಿನ ತೀರ್ಮಾನ.

ವಿದ್ಯಾಲಯವು ರಜತ ಮಹೋತ್ಸವದತ್ತ ಅಡಿಯಿಡುತ್ತಿರಲು, ಅದರ ಆರಂಭಾಚರಣೆಗಳ ಆಚರಿಸಲು.., ಶನಿವಾರ ಮಂಜಾನೆಯ ಚುಮು ಚುಮು ಚಳಿಯಲ್ಲಿಯೇ ಭೂಮಂಡಲದ ಮೂಲೆ ಮೂಲೆಯಲ್ಲಿಂದ( ಕೆಲವರು.. ಮಿಕ್ಕವರು ನಮ್ಮ ಕನ್ನಡನಾಡಿನಿಂದಾನೆ) ಚಿಟ್ಟೆಗಳಂತೆ ಹಾರಿ ಬಂದು  ಮಾವಿನಕೆರೆಯ ಸುಮಾರು ಮುವತ್ಮೂರು ಎಕರೆ ಶಾಲೆಯ ಆವರಣವನ್ನು  ಸಿಂಗರಿಸಿದರು. (ವಿಶೇಷವೆನೇಂದರೆ ಸುಮಾರು ಚಿಟ್ಟೆಗಳ ಬಣ್ಣವೆಲ್ಲ ಒಂದೇ.. ಆಯಿತು ಭಾನುವರದಂದು)

ಪ್ರಸಕ್ತ ಶಾಲೆಯ ವಿದ್ಯಾರ್ಥಿಗಳಿಗೆ ವ್ರುತ್ತಿ ಶಿಕ್ಷಣ, ಉದ್ಯೋಗಾವಕಾಶದ ಕುರಿತು ಮಾರ್ಗದರ್ಶನ ಮತ್ತು ಎಳೆಯರಲ್ಲಿ ಕ್ರಿಯಶೀಲತೆ ಮೂಡಿಸುವ ಚಿತ್ರ ಸಂಗ್ರಹ ಜೋಡಣೆ, ವೈದ್ಯಕಿಯ ತಪಾಸಣೆ ಹೀಗೆ ಇತ್ಯಾದಿ ಉಪಯುಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಹಳೇ ವಿದ್ಯಾರ್ಥಿಗಳಿಗೆಂದೇ ಕ್ರೀಡಾಸ್ಪರ್ದೆ, ಪ್ರತಿ ಸ್ಪರ್ದೆಯಲ್ಲೂ ಭಾಗವಹಿಸುವವರ ಸಂಖ್ಯೆ ಹೇರಳವಾಗಿಯೇ ಇತ್ತು. ಹಳೇ ವಿದ್ಯಾರ್ಥಿಗಳು ತಮ್ಮ ಯುವಕ/ಯುವತಿರೆಂಬ ಪಟ್ಟ ಕಳೆದುಕೊಳ್ಳುವ್ ಹೊಸ್ತಿಲಲ್ಲಿದ್ದವರು, ಕೆಲವರು ಕಳೆದುಕೊಂಡು( ಆಂಟಿ/ಅಂಕಲ್) ಮದ್ಯ ವಯಸ್ಕರಾಗಿದ್ದರೂ ತಮ್ಮಲ್ಲಿರುವ ಕ್ರೀಡೆ ಮಾಸಿಲ್ಲವೆಂದು ತೊರ್ಪಡಿಸಿದ್ದು ಉಲ್ಲೇಖನಿಯ.

ಸಂಜೆ ರಸಸಂಜೆಯಗಿದ್ದು ರಸಪ್ರಶ್ನೆ ಕಾರ್ಯಕ್ರಮದ ಕಾರುಬಾರಿನಿಂದಲೇ, ಅಂತೂ ಇಂತೂ ಎಂ. ಪಿ ಹಾಲ್ ನಲ್ಲಿ ಕೌನ್ ಬನೇಗಾ ಕರೋಡ್ ಪತಿಯ ವಾತಾವರಣ ಸುಳಿದಾಡಿತು. ಚಿಣ್ಣರು ನಾಮುಂದು ತಾಮುಂದೆಂದು ಹುಮ್ಮಸಿನಿಂದ ಉತ್ತರಿಸಿ ಚಾಕೊಲೇಟ್ ಅನ್ನು ಗೆದ್ದು ಸಂಭ್ರಮಿಸಿದರು.
 ಆಡಿ ದಣಿದಿದ್ದ ವಿದ್ಯಾರ್ಥಿಗಳಿಗೆ ರಾತ್ರಿಯ ಬಾರಿ ಭೋಜನ ಸಿದ್ದವಾಗಿತ್ತು. ಭೋಜನದ ನಂತರ ಅತಿ ಹಿರಿಯ ವಿದ್ಯಾರ್ಥಿಗಳು ಸುಮಾರು ಎಳು ವರ್ಷಗಳ ಕಾಲ ಪ್ರತಿದಿನವೂ ದಿಟ್ಟಿಸುತ್ತಿದ್ದ ಹಳೇಕೋಟೆ ಬೆಟ್ಟ್ದ ಇರುಳು ಪ್ರಯಾಣದ ಪರಿಚಯಕ್ಕೆ ಹೊರಟರು.
ಮತ್ತೊಂದು ಗುಂಪು ಹಳೇ ವಿದ್ಯಾರ್ಥಿಗಳಲ್ಲಿ ಕಿರಿಯರು ಹೆಚ್ಚು ಕಡಿಮೆ ನಗೆ ಹಬ್ಬವನ್ನೆ ಮಾಡಿದರು, ಚಂದಮಾಮ ಆಗಸಕ್ಕೇರಿದರೂ.. ಮಂಜಾನೆಯ ಮಂಜಿನಲ್ಲಿ ಹಕ್ಕಿಗಳ ಚಿಲಿಪಿಲಿಯಂತೆ ಚಿಟಗುಡುತ್ತ ಚಿಗರೆಗಳಂತೇ ಕುಣಿದು ಕುಪ್ಪಳಿಸಿದರು.

 ಶನಿವಾರ ಮುಗಿದು ಭಾನುವಾರ ತಿಳಿದಿದ್ದು... "ಕಣ್ ಬಿಡುವುದಕ್ಕೂ ಮುನ್ನ ನೀಡಿದ ಚಹ ಸವಿದ ಮೇಲೆಯೇ... ಅದ್ ನಿಜಕ್ಕೂ ಅವಿಸ್ಮರಣೀಯ"...
ತಿಂಡಿಗೂ ಮುನ್ನ... ಆಟ.. ಕೆಲವರು ಈಜಾಟ ... (ಮತ್ತೆ  ಸಿಗದ ಬಾಲ್ಯದಂತೆ)...
ಆಗಲೇ ಶಾಲೆಯ ಆವರಣದಲ್ಲಿ ಸಂಭ್ರಮದ ಚಾಯೆ ಆವರಿಸಿತ್ತು., ಶಾಲೆಯ ಸಂಸ್ಥಾಪಕ ಪ್ರಾಂಶುಪಾಲರು ಹಾಗೂ ನೆಚ್ಚಿನ ಗುರುಗಳಾದ ಶ್ಯಾಮಲ ಮೇಡಮ್, ಶರಣಪ್ಪ ಸರ್, ಬಸವರಾಜ್ ಸರ್  ಆಗಮಸಿದ್ದು ಎಲ್ಲರಿಗೂ ಅತೀವ ಸಂತೋಷವಾಗಿತ್ತು. ವಿದ್ಯಾಲಯದ ಪ್ರಾಂಶುಪಾಲರಿಗೆ ಮತ್ತು ಭೋಧಕವರ್ಗ, ಭೋಧಕೇತರ ವರ್ಗದವರಿಗೆಲ್ಲಾ ಅನಂತಪೂರ್ವ ಧನ್ಯವಾದಗಳನ್ನು ಸಲ್ಲಿಸಲೇಬೇಕು ಅವರ ಸಾಂದರ್ಭಿಕ ಸಹಾಯ ಹಾಗೂ ಅದ್ಭುತ ಒಡನಾಟಕ್ಕೆ.
ಪುಟಾಣಿ ಬಾಲೆಯರ ನ್ರುತ್ಯ, ವೀರಗಾಸೆ, ಮೈನವಿರೆಳಿಸುವ ದೀಪ ನರ್ತನ ಎಲ್ಲರ ಕಂಗಳ ಮುದ ನೀಡಿದವು.

ಮದ್ಯಾಹ್ನದ ಎಲ್ಲರ ಅಚ್ಚು ಮೆಚ್ಚಿನ ಪುಳಿಯೋಗರೆ ಹೊಟ್ಟೆ ಸೇರಿದ ನಂತರ ಮೀಸಲಾಗಿದ್ದು.. ಕ್ಯಾಮರ ಕಣ್ಣಿಗೆ. ಎಲ್ಲರೂ ಗುಂಪು ಗುಂಪಾಗಿ ಸಹಪಾಠಿ ಮಿತ್ರರೊಂದಿಗೆ ನೆಚ್ಚಿನ ಗುರುಗಳೊಂದಿಗೆ ಕ್ಯಾಮರ ರೆಪ್ಪೆಯ ಮಿಟಿಗಿಸಿದ್ದೋ ಮಿಟಿಗಿಸಿದ್ದು. ಹೀಗೆ ಎರಡು ದಿನದ ಸುದೀರ್ಘ ಕ್ಷಣಗಳು ಕ್ಷಿಣಿಸಿ ಹಿಂದಿರುಗುವ ಕ್ಷಣಗಣನೆ ಪ್ರಾರಂಭವಾದಗ ಎಲ್ಲರೂ ಒಲ್ಲದ ಮನಸ್ಸಿನಿಂದ ಭಾರವಾದ ಹ್ರುದಯದಲ್ಲಿ ವಿದಾಯ ಹೇಳಿ ಹೋರಡತೊಡಗಿದರು.

ಹಾಗೆ ಶಾಲೆಯ ಮೇಲೆ ಅನುರಾಗ, ಭವ್ಯ ಪ್ರಣಯವಿಟ್ಟು ರಜತ ಮಹೋತ್ಸವಕ್ಕೆ ಒಡೋಡಿ ಬನ್ನಿ ಎಂದು ಕರೆದು...
ಮರಳಿ ಬಂದಾಯ್ತು.. ಹಳೇ ಜೀವನಕ್ಕೆ (ವಾಸ್ತವಕ್ಕೆ).

Friday, October 21, 2011

ನಾ ಕರಗಿ ಹೋಗುತ್ತಿದೆ...ಅಣು ಅಣುವಾಗಿ


ವಿರಹ ವಿಶ್ಲೆಷಣೆ ಮಾಡೋ ಪ್ರೆಮೇಯ ಬರಲಿಲ್ಲ ನನಗೆ....,
ನೀನಿರುವಾಗಾ ಪ್ರೀತಿಯ ಸೂರ್ತಿ ಸೆಲೆಯಾಗಿ....
ನನ್ನ ಹ್ರುದಯದ ಪರಪಂಚದ ಪ್ರೀತಿಯ ವಿಶ್ಲೇಷೆಕಿಯಾಗಿ ಮಾಡುತ್ತಿದ್ದೆ,
ಪ್ರತಿ ಬಾವನೆಯನ್ನು... ಕನಸು ತುಂಬಿದ ಬಣ್ಣಬಣ್ಣ ಒಕುಳಿಯಾಗಿ...!


ಸದಾ ಎದೆಯೊರಗಿ ನೀ... ಮುದ್ದಿನಿಂದ ಗುದ್ದುತ್ತಿರಲು ..
ನಾ ಕರಗಿ ಹೋಗುತ್ತಿದೆ...ಅಣು ಅಣುವಾಗಿ !!!

ಹೀಗಿರುವಾಗ ವಿರಸ ಸುಳಿಯದ ವಿನೋದಮಯ ಪಯಣದಲ್ಲಿ..
ವಿರಹದ ಸುರುಳಿ ಸುಳಿಯಲು ಸಾಧ್ಯವೇ????

Sunday, October 9, 2011

Scene 1... BAR table #3

(ಟೈಟ್ ಸೀನ):.... ಎನೋ ಮಚ್ಚ ಆಕಾಶ ತಲೆ ಹೋತ್ತಕೋಂಡಿರೋಹಾಗ್ ಕೂತ್ತಿದ್ದಿಯಲ್ಲೊ!!! ತಗೋಳೊ...30!!
 (ಬೋರ.. ): Boss ಬೈದ್ರ??? tensionಅಅಅ??? ಯಕೋ???

 (ಟೈಟ್ ಸೀನ):ಇಲ್ಲಾಪ್ಪ...ಒಂದ್ ಡೌಟು??
 ಹುಡ್ಗಿರೇ ಕಮ್ಮಿ...
 ಇರೋ ಹುಡ್ಗಿರಲ್ಲಿ... ನಡು ನೋಟ ಇರೋವ್ರೆ ಕಮ್ಮಿ!!!
ನಡು ನೋಟ ಇರೋ ಹುಡ್ಗಿರಲ್ಲಿ.... ನಡೆ ನುಡಿ ಇರೋವ್ರೆ ಕಮ್ಮಿ!!!
 ನಡೆ ನುಡಿ ಇರೋ ಹುಡ್ಗಿರ್ ಕಡೆ ನೋಡೋಕೆ...
ಅವ್ರುಗಳಿಗೆ ಬೇರೆ ಕಡೆ ಒಡನಾಟ!!
ಎನೇ permutation combination ಮಾಡಿ ನೋಡಿದ್ರು... satisfaction ಅಗೋ figureಸಿಗಲ್ಲಪ್ಪ!!

 (ಬೋರ.. ):ಸರಿ ಇವಗ್ ಯಾಕೇ ಈ ಡೌಟು... ???
(ಟೈಟ್ ಸೀನ): ಹತ್ತ್ ವರ್ಷದಿಂದ ನೋಡ್ತಾ ಇದ್ದ...
"ಹಂಸ" ಗೇ... 8 ಜನ ಇದ್ದಿದ್ದೆ ಗೊತ್ತಿಲ್ಲ ಅದಿಕ್ಕೆ!!

 (ಬೋರ.. ): ಇವಾಗ.. ನಿಂಗೆ... 6 dove ಇರೋದೋ ನಮ್ಗೆ ಗೊತ್ತಾ...
 (ಟೈಟ್ ಸೀನ): ಗೋತ್ತಿಲ್ಲ್ದೆ... 6 ಜನ ಅಂತ ಹೆಂಗೇ. ಹೇಳಿದ್ರಿ...its 7 ದಡ್ರಾ..!! ಇನ್ನು 30 ಕಣಾಪ್ಪ!!

Just Thought !!

ಎದೆಯಲ್ಲಿ ಎರುತಿದೆ ಬಿರುಗಾಳಿ ನಿನಾಗಗಿ!!.., ನಿನ್ನನ್ನು ನೋಡಲು ಕುತೂಹಲದಿಂದ ಕೆಕ್ಕರಿಸಿ ಕುಳಿತಿದೆ ಮನಸ್ಸು ;) ಆದ್ರೂ... ಬುದ್ದಿಯೆಂಬ ಬುರುಡೆ ಉರುಳಿ ಉರುಳಿ ಒಡ್ತಿದೆ, ದೂರ ಹೆದರಿ ಹೆದರಿ!! ಇಡೀ ಕತೆ ಮೂರೆ ಸಾಲಲ್ಲೆ!! ಮೂಗಿಸೋಕೆ ಮನಸಿಲ್ಲ!! ಇನ್ನ ಹೇಳೊಕೆ ಎನೂ ಉಳಿದಿಲ್ಲ.... ಯಾಕೆದ್ರೆ.. ????? ಎನಾದ್ರು ಆಗಿದ್ರೆ ತಾನೆ ಹೇಳೊದು :( :(

Sunday, July 3, 2011

ಕಣ್ ನೋಟ ;)


ನೀನಗೆಂದೆ ಈ ಎಲ್ಲ ಮನದ ಮಾತು...
ಹೇಳುವ ಅತುರ ನನಗೇ :(.... ಕೇಳುವ ಕಾತರ ನೀನಗಿಲ್ಲ.
ಬಿಚ್ಚದೆ.., ಎದೆಗೂಡಲ್ಲೆ ಬಚ್ಚಿಡ ಬಯಸಿದ್ರು...
ಬಗ್ಗಿ ಬಗ್ಗಿ ನೋಡುವ ಬಯಕೆ ಕಂಗಳ ಮುತ್ತಿನ ಹನಿಗೆ .. ಭುವಿಯನ್ನ!

ಸಹಿಸಲಾಗದು ಸಂಕಟ...
ಭಾವನೆ ಬವಣೆ..ಭಾಂದವ್ಯ., ಬರಿಯ ... ನೀರ ಹನಿಯಾಗಿ ಬರಿದಾಗುವಾಗ.
ಅದಕ್ಕೆ ನಾ ಹೇಳಿದೆ ನಿನಗೆ ಕಿರುಚಿ... ಕಿರುಚಿ....
ಆದರೆ ತಿರುಚಿ ತಿರುಚಿ.... ಕೇಳುತ್ತಿದ್ದೆ ನೀನು, ಎನು ತಿಳಿತಿಲ್ಲವೆಂದು..!

ಕಣ್ ನೋಟದಲ್ಲೆ.. ಸಾವಿರಾರು ಪುಟಗಳಷ್ಟು ವಿಷಯವಿದ್ರು....
ಅರ್ಥೈಯಿಸದ.. ಒಲ್ಲದ ಮನಸ್ಸಿನ ವಿಷಾದ ಯಾರಿಗೆ ಬೇಕು.
ಆದ್ರು.. ಆ ಕ್ಷಣ... ರೋಮಂಚನ ಇಂದಿಗೂ... ಎಂದಿಗು ಎಂದೆಂದಿಗೂ :)
ಕೊನೆಗು ರೋಮಂಚನದ ತರಂಗ... ಪತಂಗದಂತೆ ಹಾರಿ ಕೂರಲಿಲ್ಲ ನಿನ್ನ ಎದೆಗೂಡಲ್ಲಿ
ಆ ಕ್ಷಣ ಪರಿಕಲ್ಪನೆಗೂ ಸಿಗದಷ್ಟು ಮಿಗಿಲು!..

Saturday, May 28, 2011

ಹಂಗೆ ಸುಮ್ನೆ!

ಚೆಂದದ ಮನಸ್ಸಿನಿಂದ ನೋಡಿದ್ರೆ ....
ನೋಡೊ ಪ್ರತಿಯೊಂದು..
ಸಂಬಂಧ..
ಸಮಯ..
ಸಂದರ್ಭ..
ಎಲ್ಲವು ಚಂದನದ ಪರಿಮಳದಂತೆ ಅಹ್ಲಾದಕರ..!!
ಆದರೆ... ಪ್ರತಿ ಕ್ಷಣವು ಅದರದೇ ವಿಶಿಷ್ಟ ಪಡೆದಿರುತ್ವೆ...
ಯಾಕೇಂದ್ರೆ ನೋಡೊ ಮನ ಚೆಂದವಿದ್ರು...
ಕಣ್ಣಿರು ಹಂಬಲಿಸಿ... ಹಂಬಲಿಸಿ... ಕೆನ್ನೆಗೆ ಮುತ್ತಿಕ್ಕ ಬಯಸುತ್ತದೆ.

Sunday, January 30, 2011

ಮನದ ಮಾತು

ನೀರೆಯರು... ಸತ್ಯನಾ ಮಾತಲ್ಲಿ ಮುಚ್ಚಿಡ್ ಬಹುದೆ ವಿನಾ...!!
ಮನಸ್ಸಿನಲ್ಲಾದ ಸಂತೋಷವನ್ನಲ್ಲ...
ಎಷ್ಟೆ ಪ್ರಯತ್ನಿಸಿದರು ... ಕಣ್ಣ್ಂಚಿಲ್ಲಿ ಕಿರುನಗೆಯ ಬೀರಿ ನಕ್ಕುಬಿಡುವ ಮನದಾಳದ ಹಂಬಲ...
ಕ್ಷಣ ಮಾತ್ರದಲ್ಲಿ ಮಿಂಚಿ ಮಯವಾಗುತ್ತೆ!!

ಮಿಂಚಿನ ಕ್ಷಣವಾ ಹೆಕ್ಕುವ ಕಲೆಯಿರಬೇಕಷ್ಟೇ ;)